Friday, August 13, 2010

ಹಸಿರು

ಎಷ್ಟೋ ವರ್ಷಗಳ ಕಾಲ ನೆರೆವಾದ ನನಗೆ ಬಂದಿತೀಗ ಸಂಚಕಾರ ...................
ಇದೋ ನೋಡು ಅವರ ನೋಟ ನನ್ನತ್ತಲೇ, ಮಾತಿನ ಅಬ್ಬರ, ನನ್ನ ಅವನತಿಗೆ ಸಂಚಕಾರ, ಒರಟು ಮಾತುಗಳು ಚುಚು ನುಡಿಗಳು, ಮಚ್ಹು - ಕುಡಗೋಲು, ಹುಳಿ - ಸುತ್ತಿಗೆ, ಅವರ ಕೈಯಲ್ಲಿ, ನನಗೆ ಓಡಲು ಬರುವುದಿಲ್ಲ, ಹೋರಾಡಲು ಬರುವುದಿಲ್ಲ,ಎಲ್ಲೋ ದೂರದಲ್ಲಿ ನೆನ್ನೆ ಒಡನಾಡಿಗಳು ಅಸಹಾಯಕರಾಗಿ ನೋಡುತ್ತಾ ನಿಂತಿದ್ದಾರೆ. ನನ್ನ ಉತ್ತರ ಯಾರಿಗೂ ಬೇಕಿಲ್ಲ, ಇಗೋ ನನ್ನ ಮೇಲೆ ಶುರುವಾಯಿತು ಜನರ ಪ್ರಹಾರ,ನನ್ನ ಕೂಗು ಯಾರಿಗೂ ಕೇಳಿಸದು, ನನ್ನ ಅಳುವು ಯಾರಿಗೂ ಕಾಣದು, ಹತ್ತು ಹಲವು ಜನ, ಅವರದೇ ಆದ ರೀತಿಯಲ್ಲಿ ನನ್ನ ಅವನತಿಯನ್ನೇ ಕಾಯುತ್ತಿದ್ದಾರೆ ಎನ್ನುವ ಭಾವನೆ..........

ನನ್ನ ಗೂಡಿನಲ್ಲಿರುವ ಪಕ್ಷಿಗಳಿಗೆ ತಳಮಳ, ನನ್ನ ನೆರಳಲ್ಲಿ ಬೆಳೆದವರಿಗೆ ನೆರಳಿನ ಚಿಂತೆ, ನನ್ನ ರಕ್ಷಿಸುವಲ್ಲಿ ಆ ಭಗವಂತನೇ ಮರೆತನೆ ಎಂದು ಆಕಾಶ ನೋಡುತ್ತಾ ಪೆಟ್ಟು ತಿನ್ನುತ್ತ ಹಿಂದುರಿಗಿ ನನ್ನ ಹಾದಿಯನ್ನು ನೆನಸಿಕೊಂಡೆ .......................

.ಜರ್ಜರಿತವಾಗಿ ಬೃಹದಾಕಾರದಲ್ಲಿ ಕೈ ಕಾಲು ಚಾಚಿಕೊಂಡು, ಮಳೆಯಲ್ಲಿ ನೆನೆಯುತ್ತ, ಬಿಸಿಲಲ್ಲಿ ಒಣಗುತ್ತ,ಗಾಳಿ ಬಂದ ಕಡೆಗೆ ಸದ್ದು ಮಾಡುತ್ತಾ ಓಲಾಡುತ್ತಾ ........... ಬರವೇ ಇರಲಿ ಪ್ರವಾಹವೇ ಬರಲಿ ಜಗ್ಗದೆ ನಿಂತು, ವನ, ನರರನ್ನು, ನನ್ನದೇ ಆದ ರೀತಿಯಲ್ಲಿ ರಕ್ಷಿಸುತ್ತ, ಎಲ್ಲರು ಅತ್ತಾಗ ನನ್ನ ತನವನ್ನು ಧಾರೆ ಎರೆದು ಸಂತೈಸುವೆ, ನಗುವಿಲ್ಲದ ಜೀವನ, ಅಂಜಿಕೆ ಇಲ್ಲದ ಬದುಕು, ನೀರಿಲ್ಲದೆ ಒಣಗಿ, ನೆರಳಿಲ್ಲದೇ ಬದುಕು ಸಂಭ್ರಮಿಸುವ 
ಶಕ್ತಿ ನನ್ನದು. ಹಸಿವಿನ ಬೇಗೆಯನು ಇಂಗಿಸಿಬಲ್ಲೆ,ಪ್ರೇಮಿಗಳ ಪ್ರೀತಿಯನ್ನು ಬಚಿಟ್ಟೆ, ಒಂದು ಮಾಡಿದೆ, ಕಲಹಗಳಿಗೆ ಮೂಕ ಸಾಕ್ಷಿಯಾದೆ,ಸಾವು ನೋವುಗಳಿಗೆ ಪ್ರತ್ಯಕ್ಷದರ್ಶಿಯಾದೆ, ನೀರಿಲ್ಲದೆ ನನಗೆ ದಾಹವಾದಾಗ, ಯಾರೋ ಒಂದೆರೆಡು ಹನಿ ಹಾಕಿ ನನ್ನ ಬೆಳೆಸಿದವರ ನೆನೆದೆ.... ಆಶ್ರಯ ನೀಡಬಲ್ಲೆ, ಓದು ಬರಹದ ತಾಣವಾಗಬಲ್ಲೆ, ಜನರ ಜಾತ್ರೆಗೆ ಆಸರೆ ನೀಡಬಲ್ಲೆ, ಎಷ್ಟೋ ದಿನ ಹಲವು ಸಂಸಾರಗಳು ನನ್ನನ್ನು ಆಶ್ರಯಿಸಿದ್ದು ಉಂಟು.....

ಈ ಸುಖಗಳ ಮುಂದೆ ಪೆಟ್ಟುಗಳ ಕಡೆಗೆ ಗಮನ ಹೋಗಲಿಲ್ಲ, ಸಾರ್ತಕಥೆಯ ನಿಟ್ಟುಸಿರು.
ನನ್ನ ಹಾದಿಯೇ ನನ್ನ ಬದುಕಿಗೆ ಪ್ರೇರಣೆ.

ಮರಗಟ್ಟಿದ ಬದುಕೋ ಅಥವಾ ಬದುಕಿದ್ದೆ ಮರವಾಗೋ ಎಂದು ಅರಿಯದಾದೆ .
ಮುಂದಿನ ಜನುಮ ಒಂದಿದ್ದರೆ ನನ್ನ ಮರವಾಗಿಸಯ್ಯ !!! ಎಂದು ಬೇಡಿದೆ 

ಬದುಕೇ ಹಸಿರು ಎನ್ನುವ ಧನ್ಯತೆ.......
ದಯಮಾಡಿ ಮರಗಳನ್ನು ರಕ್ಷಿಸಿ ................................