Tuesday, November 23, 2010

ಮನುಜ

ಕನಸನ್ನು ಹೊತ್ತು ನಡೆಯುವ
ಕಾರ್ಮೋಡಗಳ ದಾಟುವ ಬೆಳಕಿನಂತೆ 
ನಕ್ಷತ್ರಗಳ ನೋಡಿ ಎಣಿಸುವ
ಚಂದಿರನ ಮಂದಹಾಸದಂತೆ 
ಹಸಿರ ನೆಟ್ಟು ಬೆಳೆಸುವ 
ಪ್ರಕೃತಿಯ ಮಡಿಲಿನಂತೆ
ಮೀನಿನ ಆನಂದ ಸವಿಯುವ 
ತುಂಬಿದ ಕೆರೆ, ನದಿ, ಸಮುದ್ರದಂತೆ 
ಹಣ್ಣ ಕಂಡು ಹಾರುವ 
ಆಕಾಶದ ಪಕ್ಷಿಗಳಂತೆ 
ಬೇಟೆಯಾಡಿ ಬದುಕುವ 
ಕಾಡಿಲ್ಲದ ಪ್ರಾಣಿಗಳಂತೆ 
ಅಸೂಯೆ ಬಿಟ್ಟು ಬದುಕುವ 
ಸ್ವಾರ್ತವಿಲ್ಲದ ಮನುಜರಂತೆ.

Saturday, November 20, 2010

ಜೀವನ

ಎಂತಹ ವಿಸ್ಮಯ ಪ್ರಪಂಚ, ಎಲ್ಲವು ಇದ್ದು ಇಲ್ಲದ ಹಾಗೆ ಬದುಕುವ ಜನರೆಲ್ಲಿ,
ಏನೋ ಒಂದು ಕೊರತೆ ಇದ್ದು ಜೀವನವನ್ನು ಎದುರಿಸುವ ಮನುಷ್ಯರೆಲ್ಲಿ, ತಮ್ಮ ತಪ್ಪೇ 
ಇಲ್ಲದೆ ಜೀವನವನ್ನು ಎದುರಿಸುವ ಮಕ್ಕಳೆಲ್ಲಿ ???

೨ ಅಡಿ ಉದ್ದ ಇರಬಹುದು ಈ ವ್ಯಕ್ತಿ, ಮಾತನಾಡಿದರೆ ಕೀರಲು ಧ್ವನಿ, ಅಪಾರ ಬುದ್ದಿ ಶಕ್ತಿ 
ಯಾವುದೇ ಚಿತ್ರವನ್ನು ಬಿಡಿಸಬಲ್ಲ, ಮಕ್ಕಳಂತೆ ಇರುವ ಇವನ್ನ ಪುಟ್ಟ ಕೈಗಳು....
ಮಾತು ಹೊರಡುವುದಿಲ್ಲ, ಕಣ್ಣಿನಲ್ಲಿ ಕಂಗೊಳಿಸುವ ಆ ಹೊಳಪು, ಬದುಕಿ ತೋರಿಸುತ್ತೇನೆ 
ಎನ್ನುವ ಛಲ ಕಾಲ್ನಡಿಗೆಯಲ್ಲಿ ಹುರುಪು, ಕೈ ಸನ್ನೆ ಮಾಡಿ ತೋರಿಸುವ ಈತನ ಜ್ಞಾಪಕ 
ಶಕ್ತಿಗೆ ಒಂದು ಸಲಾಂ....

ಮನ ತುಂಬಿ ಬರುವ ಸಂತಸ, ನೋಡಿದರೆ ಮರೆಯಲಾಗದ ವ್ಯಕ್ತಿತ್ವ, ಶುಬ್ರ ವಸ್ತ್ರವ 
ಧರಿಸಿ ಯಾವುದು ದೇಶದ ರಾಜಕುಮಾರನಂತೆ ಕಂಗೊಳಿಸುತ್ತಾನೆ ...................

ಜೀವನ ಅನ್ನೋ ಹೆಸರು ಇವನಿಗೆ, ನಮ್ಮಂತಹ ಅನೇಕರಿಗೆ ಜೀವನದ ಅತಿ ದೊಡ್ಡ ಪಾಠ 
ಕಲಿಸಿದ್ದಾನೆ, ಕಣ್ತೆರೆಸಿದ್ದಾನೆ.
ಜೀವನ ಒಬ್ಬ ೧೮ ವರ್ಷದ ಯುವಕ, ಜೀವನದ ಹಲವು ತೊಂದರೆಗಳಿಂದ  ಬಳಲ್ಲುತ್ತಿದ್ದಾನೆ,
ಇವನಿಗೆ ಬೇಕಾಗಿರುವುದು ನಮ್ಮ ಅನುಕಂಪವಲ್ಲ, ನಮ್ಮೊಂದಿಗಿನ ಒಡನಾಟ.......

ಬದುಕು ಬದುಕಿರೋ..

ಮೆಚ್ಚುವ ಬದುಕು ಬದುಕಿರೋ,
ಪರರನ್ನು ಮೆಚ್ಚಿಸುವ ಬದುಕು ಬದುಕಲ್ಲ,
ಇಹವನು ತ್ಯಜಿಸಿ ಬದುಕಿಲ್ಲ,
ಇಹದೊಳಗೆ ಬದುಕು ಕಾಣಿರೋ.

ಮೇಲು ಕೀಳೆಂಬ ಭೇದಗಳಿಲ್ಲ,
ಜಾತಿ ಮತವೆಂಬ ನಿಂದನೆಗಳಿಲ್ಲ ,
ಪ್ರೀತಿ ಮಮತೆ ಎಂಬ ಮಮಕಾರದಲಿ, 
ಬಾಂಧವ್ಯ ಬವಣೆಗಳ ಮಿಶ್ರಣದಲಿ.

ಸತ್ವ ಸಹನೆಗಳ ಬದುಕು,
ಸ್ನೇಹ ಸಹಜದ ಬದುಕು,
ಸಹೃದಯ ಮಮಕಾರದ ಬದುಕು,
ಮೆಚ್ಚುವ ಬದುಕು ಬದುಕಿರೋ.....

ಅಮ್ಮ

ಕನಸುಗಳ ಕಾಣುತ್ತ ಕಳೆವ ದಿನಗಳು 
ದಿನಗಳು ಹತ್ತಿರವಾದಂತೆ  ತವಕ
ನೋವನ್ನು ಸಹಿಸಿ ಜೀವ ನೀಡುವ ಪರಿ 
ಆ ಜೀವವನ್ನು ತನ್ನ ಎದೆಗೊತ್ತಿ ಮುದ್ದಿಸುವುದು 
ಅತ್ತಾಗ ಹಾಲು, ನಕ್ಕಾಗ ಕಲ್ಲು ಸಕ್ಕರೆ
ತೆವಳಿದರೆ ಸಂತಸ, ಮೊದಲ ಹೆಜ್ಜೆಯಿಟ್ಟಾಗ 
ಹೇಳಿಕೊಳ್ಳಲಾಗದ ಆನಂದ ಭಾಷ್ಪ
ಚೇಷ್ಟೆ ಮಾಡುತ್ತಿದ್ದಾಗ ಪ್ರೀತಿಯ ಪೆಟ್ಟು 
ಶಾಲೆಗೇ ಬಿಡುವಾಗ ತವರನ್ನು ಅಗಲಿದ ಅನುಭವ
ಮೆಟ್ಟಿಲುಗಳನ್ನು ಏರುತ್ತಿರುವಾಗ ಕಣ್ಣಂಚಿನಲಿ 
ತೊಟ್ಟಿಕ್ಕುವ ಆ ಮುತ್ತಿನ ಹನಿಗಳು
ತನ್ನ ಎಲ್ಲ ನೋವುಗಳನ್ನು ಮರೆತು ಸ್ಪಂದಿಸುವ  
ಆ ವಿಶಾಲ ಹೃದಯ........ ಅಮ್ಮನಲ್ಲಿ ಮಾತ್ರ ಸಾಧ್ಯ 

ಕನಸೋ ನನಸೋ !

ಪ್ರಾಯದ ಪ್ರೌಢಿಮೆಯ ಅರಿವಿಲ್ಲ 
ಪರ ಊರಿನ ವ್ಯಾಮೋಹ ಸೆಳೆಯಿತಲ್ಲ 
ಬೆಳಕನ್ನು  ನೋಡಿಯೇ ಇಲ್ಲ,
ಕತ್ತಲಲ್ಲಿ ಬೆಳಕಿನ ದೀಪಗಳೇ ಎಲ್ಲ.

ಹೂವಿನ ಚೆಲುವನ್ನು ಸಹಿಸದವರು 
ಗಿಡದಲ್ಲಿದ್ದ ಹೂವನ್ನು ಕದ್ದು, ಕಿತ್ತು ತಂದರು 
ಹೊಸ ತೋಟವೆನ್ನುವ ಕನಸು ಹೂವಿಗೆ 
 ಕನಸೇ ಬಾರದ ಹಂಗೆ ಬಿಗಿದ ಕಪ್ಪು ಬಟ್ಟೆ ಕಣ್ಣಿಗೆ

ಹೂವಿನ ಎಸೆಳುಗಳನ್ನು ಕಿತ್ತು ಹಾಕಿ 
ಹೂವಿನ ಸಾರವನ್ನು ದುಸ್ಸಾರವಾಗಿಸಿ 
ಅಸ್ತವ್ಯಸ್ತವಾಗಿ ಬಿದ್ದಿದ್ದ ಎಸೆಳುಗಳನ್ನು 
ಕನ್ನಡಿ ಮುಂದೆ ಜೋಡಿಸಿಕೊಳ್ಳುವಾಗ,


ಕನ್ನಡಿಯ ಪ್ರತಿಬಿಂಬ ಕೇಳಿತು 
ನೀನು ಸುಖಿಸಿದ್ದು ಕನಸೋ ನನಸೋ !!!

ಬದುಕು

ನೋಡುವುದು, ಕೇಳುವುದು 
ಮಾಡುವುದು ಬಹಳಷ್ಟಿದೆ 
ನೋಡಲಾಗುತ್ತಿಲ್ಲ ಕೇಳಲಾಗುತ್ತಿಲ್ಲ ಮಾಡಲಾಗುತ್ತಿಲ್ಲ 
ಎಲ್ಲವನ್ನು ನೋಡಿ ನೋದದಂಥ 
ಕೇಳಿ ಕೇಳಿದಂಥ
ಮಾಡಿ ಮಾಡದಂತ ಬದುಕು ನಮ್ಮದು 
ಆದರೆ ಎಲ್ಲವನ್ನು ನೋಡದಂತೆ ಕೇಳದಂತೆ 
ಏನೇನೋ ಬ್ರಮ್ಹೆಯಲ್ಲೇ ಸಾಗಿದೆ 
ಪೂರ್ಣವಲ್ಲದ ಪೂರ್ತಿಯಾಗದ 
ಒಮ್ಮೆ ಮುಕ್ತಾಯ ಕಾಣುವ ಈ ಬದುಕು

ಮನಸು

ಎಷ್ಟು ವಿಚಿತ್ರ ಈ ಮನಸು
ಯಾವುದೇ ಬಣ್ಣವಿಲ್ಲ 
ಯಾವುದೇ ರೂಪವಿಲ್ಲ 
ಆದರು ಶ್ರುಷ್ಟಿಸುತ್ತ ನಡೆಯುತ್ತದೆ
ರೇಖೆಗಳ ಹಾಗೆ ಎಳೆದು 
ಪದವಾಗಿ ಮೆರೆದು 
ನಾದಗಳ ಹಾಗೆ ಜ್ಹೆಂಕರಿಸಿ 
ಮೌನಗಳನು ಸೀಳಿಕೊಂಡು 
ಮಂಕುತನವ ಮುಸುಕಿಕೊಂಡು 
ಉತ್ತುಂಗವಾಗಿ ನೆಗೆಯುವ ಜಲಪಾತದಂತೆ 
ಸದಾ ಚಿಮ್ಮುತ್ತಿರುವುದು ಈ ಮನಸು 

ನಾವೆಲ್ಲಿದ್ದೇವೆ ?

ನಾವೆಲ್ಲಿದ್ದೇವೆ ಜಗದೊಳು 
ನಾವೆಲ್ಲಿದ್ದೇವೆ !!!
ಮಣ್ಣಲ್ಲಿ ಮಣ್ಣಾಗಿ 
ಕಾಡಲ್ಲಿ ಕಾಡಾಗಿ 
ನೀರಲ್ಲಿ ನೀರಾಗಿ 
ಗಾಳಿಯಲ್ಲಿ ಲೀನವಾಗಿ 
ಈ ಜನ ಜಂಗುಳಿಯಲ್ಲಿ ಕಾಣದಂತೆ,
ಚಲಾವಣೆಯಲ್ಲಿ ಇಲ್ಲದ ನಾಣ್ಯಗಳಂತೆ..
ನಾವೆಲ್ಲಿದ್ದೇವೆ ???

ರಥ

ನನ್ನ ನೆನ್ನೆಗಳೇ ನನಗಿಲ್ಲ 
ನಾಳೆಯ ನೆನ್ನೆಯ ಬದುಕುವೇನಲ್ಲ 
ನೆನ್ನೆಯ ಪಾಟವ ಅರಿತಿರುವೇನಲ್ಲ 
ನೆನ್ನೆಯ ನಾಳೆಯು ಬದುಕಿರುವೇನಲ್ಲ 

ನೆನ್ನೆಯ ಸುಂದರ ಕತ್ತಲಿನಲ್ಲಿ
ಇಂದಿನ ಸುಂದರ ಬೆಳಕಿನಲಿ
ಬದುಕಿನ ಸುಂದರ ಕ್ಷಣಗಳಲಿ 
ಬದುಕಿನ ಸುಂದರ ಬವಣೆಯಲಿ

ನನ್ನ ನೆನ್ನೆಯೇ ನಾ ಕಲಿತ ಪಾಠ 
ಪರರ ನೆನ್ನೆಯೇ ನಾ ಓದಿದ ಕಥೆ 
ಜನರು ನಡೆಸಿದ ಹಾದಿಯೇ ಪಥ
ಇಂದಿನ ಬದುಕೇ ಜೀವನದ ರಥ.

ಶುಭ ಹಾರಯಿಕೆ

ಮುಂಜಾನೆಯ ಮಸುಕಿನಲ್ಲಿ 
ಅರಳಿ ನಗುತಿರುವ ಹೂವಂತೆ 
ನಗುತಿರುವ ನಿನ್ನ ಮೊಗವ 
ನೋಡಲು ಹಾತೊರೆವ ಮನ
ಇಬ್ಬನಿ ಹನಿ ನಿನ್ನ ರೂಪ ಹೆಚ್ಚಿಸಲಿ 
ಸೂರ್ಯನ ಬೆಳಕು ನಿನ್ನ ಸೌಂದರ್ಯ 
ಮಳೆಯಿಂದ ನಿನ್ನ ಗುಣ ಸ್ವಚ್ಚವಾಗಲಿ  
ನಮ್ಮೆಲ್ಲರ ಪ್ರೀತಿ ನಿನಗೆ ಶ್ರೀರಕ್ಷೆಯಾಗಲಿ 

ಎಲ್ಲ ಪುಟ್ಟ  ಕಂದಮ್ಮಗಳಿಗೂ ಶುಭ ಹಾರಯಿಕೆಗಳು :)

ನಾನು ಮಾನವನಾದ ಮೇಲೆ
ನಾನು ಹೊಳೆಯುವ ನಕ್ಷತ್ರವಾದೆ 
ನಾನು ಎತ್ತರದ ಶಿಖರವಾದೆ 
ನಾನು ಹರಿಯುವ ಸಾಗರವಾದೆ
ನಾನು ಕೈಗೆಟುಕದ ಗಾಳಿಯಾದೆ
ನಾನು ಕಡಲಾಳದ ಮುತ್ತಾದೆ
ನಾನು ಬೆಲೆಬಾಳುವ ರತ್ನವಾದೆ
ನಾನು ಎನ್ನುವ ಹೆಸರಿರುವ ತನಕ
ನನ್ನ ಕೊನೆಯ ಉಸಿರಿರುವ ತನಕ  
ಆನಂತರ ನಾನು ಒಂದು ವಸ್ತುವಾದೆ !!!  (ಸ್ವಗತ)