ಸೃಷ್ಟಿಯ ಚಮತ್ಕಾರವೇ ವಿಸ್ಮಯ !!!
ಯುಗ ಯುಗಗಳಿಂದ ಬದಲಾಗದ ಭುವಿ - ಬಾನಿನ ಅಂತರ,
ಸೂರ್ಯ - ಚಂದ್ರರ ಕಣ್ಣಾ ಮುಚ್ಚಾಲೆ, ತಾರೆಗಳ ಹೊಳಪು,
ಮೋಡಗಳ ವೈವಿದ್ಯಮಯ ಚಿತ್ತಾರ, ಬಾನಂಗಳದಲ್ಲಿ ಹಿಂಡು ಹಿಂಡಾಗಿ
ಚೆಲ್ಲಾಟವಾಡುವ ಪಕ್ಷಿಗಳ ಕಲರವ, ಪ್ರಾಣಿಗಳ ಆಹಾರ, ವಿಹಾರ,
ಹಾವಿನ ಚಲನ, ನವಿಲಿನ ನರ್ತನ, ಚಿಮ್ಮುವ ಜಿಂಕೆಗಳು, ಹೊಸಕುವ ಭೀತಿ
ಇದ್ದರು ಭುವಿಯ ಮೇಲೆ ಬಿಂಕದಿ ನಡೆಯುತ್ತಾ ಆಹಾರ ಹುಡುಕಿಕೊಳ್ಳುವ
ಹುಳು ಹುಪ್ಪಟೆಗಳ ಎಂದು ಕಡಿಮೆಯಾಗದ ಚೇತನ, ಸಾಲು ಸಾಲಾಗಿ
ಮೂಟೆ ಹೊರುವ ಇರುವೆಗಳು, ರಂಗು ಬದಲಿಸದ ಚಿಟ್ಟೆಗಳು, ಬಣ್ಣ ಬದಲಾದರು
ಫಸಲು ಕೊಡುವ ಮಣ್ಣು, ಕಾಣದಿದ್ದರೂ ಸಕಲ ಜೀವರಾಶಿಗಳನ್ನು ಬದುಕಿಸುವ ಗಾಳಿ,
ಭೀತಿಯಿಲ್ಲದೆ ಕಾಡು - ಮೇಡುಗಳಲ್ಲಿ ಹರಿವ ನೀರು ದಾಹ ತೀರಿಸುವ ಪರಿ. ಅವಶ್ಯಕತೆ
ಹೆಚ್ಚಾದರು ಸಿಹಿ ಕಡಿಮೆಯಾಗದ ಹಣ್ಣು, ಬಿಸಿಲೋ, ಚಳಿಯೋ, ಮಳೆಯೋ ಅಚ್ಚಳಿಯದೆ
ಹಸಿರಾಗೇ ಉಳಿದಿರುವ ನೇಸರ.
ಭುವಿಯ ಉದ್ದಗಲಕ್ಕೂ ಅರಮನೆಯಿಂದ ಗುಡಿಸಲವರೆಗೂ ಎಲ್ಲರನ್ನು ಕಾಪಾಡುವುದು ಸೂರು,
ಆಹಾರ, ನೀರು, ಇಂತಹ ವಿಸ್ಮಯ ಸೃಷ್ಟಿಗೆ ಸೀಮಾರೇಖೆಯ ಮಾನವ !!!
ಸೃಷ್ಟಿಯ ನಿಯಮದಂತೆ ಹುಟ್ಟುವ ಮಾನವ ಮನುಷ್ಯನಾಗಿ ಉಳಿಯದೆ, ಜಾತಿ, ಮತ,
ಪಂಗಡ, ಭಾಷೆ, ಪದ್ಧತಿ ಎಂಬ ಅಂಕುಶಗಳಿಗೆ ಸೀಮಿತವಾಗುತ್ತ ಸಾಗುತ್ತಾನೆ, ದ್ವೇಷ,
ಅಸೂಯೆ, ಭಲ ಪ್ರದರ್ಶನಕ್ಕೆ ಭುವಿಯನ್ನು ವಿಂಗಡಿಸುತ್ತಾ ಸಾಗುತ್ತಾನೆ. ಭುವಿಗೆ
ಬೇಲಿ ಹಾಕುವ ದುಸ್ಸಾಹಸದಲ್ಲಿ ಮನುಷ್ಯನಾಗಿ ಬದುಕುವುದನ್ನೇ ಮರೆತಿದ್ದಾನೆ.
ಹುಟ್ಟಿದಕ್ಕೆ ಸುಂಕ, ಕಲಿಯಲು ಸುಂಕ, ಆಹಾರಕ್ಕೆ ಸುಂಕ, ಬದುಕಲು ಸುಂಕ, ವರಿಸಲು ಸುಂಕ,
ಚಲಿಸಲು ಸುಂಕ,ತಾ ಸೃಷ್ಟಿಸಿಕೊಂಡಿರುವ ನಿಯಮಿತ ನರಕದ ಅಸುಖವನ್ನು ಆಸ್ವಾದಿಸಲು
ದಂಡ ಕಟ್ಟಲೇಬೇಕು. ಏಕೆಂದರೆ ಸೃಷ್ಟಿಯೆಂಬ ಸ್ವರ್ಗದಲ್ಲಿ, ಸುಖವನ್ನು ಸುಂಕವಿಲ್ಲದೆ ಹಂಚ್ಚುವರು ...
ಪ್ರಕೃತಿ
ನಿಸರ್ಗದ ಆಗುಹೋಗುಗಳು ಮತ್ತು ಪ್ರಕೃತಿಯ ನಿಸ್ವಾರ್ಥತೆಯ ಬಗೆಗೆ ವಿವರವಾದ ಹೂವಿನ ಹಾರ ಕಟ್ಟಿಕೊಟ್ಟಿದ್ದಿರಿ.
ReplyDeleteಭಾಷಾ ಬಳಕೆಯಲ್ಲಿ ಲಾಲಿತ್ಯ ಮತ್ತು ಭಾವನೆಗಳ ಸರಳ ಸೌಜನ್ಯದ ಕಾವ್ಯ ಪ್ರಾಕಾರ ನಿಮ್ಮದು, ಬೇಷ್!