ನನ್ನ ನೆನ್ನೆಗಳೇ ನನಗಿಲ್ಲ
ನಾಳೆಯ ನೆನ್ನೆಯ ಬದುಕುವೇನಲ್ಲ
ನೆನ್ನೆಯ ಪಾಟವ ಅರಿತಿರುವೇನಲ್ಲ
ನೆನ್ನೆಯ ನಾಳೆಯು ಬದುಕಿರುವೇನಲ್ಲ
ನೆನ್ನೆಯ ಸುಂದರ ಕತ್ತಲಿನಲ್ಲಿ
ಇಂದಿನ ಸುಂದರ ಬೆಳಕಿನಲಿ
ಬದುಕಿನ ಸುಂದರ ಕ್ಷಣಗಳಲಿ
ಬದುಕಿನ ಸುಂದರ ಬವಣೆಯಲಿ
ನನ್ನ ನೆನ್ನೆಯೇ ನಾ ಕಲಿತ ಪಾಠ
ಪರರ ನೆನ್ನೆಯೇ ನಾ ಓದಿದ ಕಥೆ
ಜನರು ನಡೆಸಿದ ಹಾದಿಯೇ ಪಥ
ಇಂದಿನ ಬದುಕೇ ಜೀವನದ ರಥ.
No comments:
Post a Comment