ಪ್ರಾಯದ ಪ್ರೌಢಿಮೆಯ ಅರಿವಿಲ್ಲ
ಪರ ಊರಿನ ವ್ಯಾಮೋಹ ಸೆಳೆಯಿತಲ್ಲ
ಬೆಳಕನ್ನು ನೋಡಿಯೇ ಇಲ್ಲ,
ಕತ್ತಲಲ್ಲಿ ಬೆಳಕಿನ ದೀಪಗಳೇ ಎಲ್ಲ.
ಹೂವಿನ ಚೆಲುವನ್ನು ಸಹಿಸದವರು
ಗಿಡದಲ್ಲಿದ್ದ ಹೂವನ್ನು ಕದ್ದು, ಕಿತ್ತು ತಂದರು
ಹೊಸ ತೋಟವೆನ್ನುವ ಕನಸು ಹೂವಿಗೆ
ಕನಸೇ ಬಾರದ ಹಂಗೆ ಬಿಗಿದ ಕಪ್ಪು ಬಟ್ಟೆ ಕಣ್ಣಿಗೆ
ಹೂವಿನ ಎಸೆಳುಗಳನ್ನು ಕಿತ್ತು ಹಾಕಿ
ಹೂವಿನ ಸಾರವನ್ನು ದುಸ್ಸಾರವಾಗಿಸಿ
ಅಸ್ತವ್ಯಸ್ತವಾಗಿ ಬಿದ್ದಿದ್ದ ಎಸೆಳುಗಳನ್ನು
ಕನ್ನಡಿ ಮುಂದೆ ಜೋಡಿಸಿಕೊಳ್ಳುವಾಗ,
ಕನ್ನಡಿಯ ಪ್ರತಿಬಿಂಬ ಕೇಳಿತು
ನೀನು ಸುಖಿಸಿದ್ದು ಕನಸೋ ನನಸೋ !!!
No comments:
Post a Comment